by gclokesh on Fri Nov 20, 2009 3:27 am
ಕಾದಿರುವಳು ಪೂಜಾಗಾಂಧಿ!
ಚಿತ್ರ: ನಿನಗಾಗಿ ಕಾದಿರುವೆ
ನಿರ್ದೇಶಕ: ಜಾಲಿ ಬಾಸ್ಟಿನ್ತಾರಾಗಣ: ಪೂಜಾ ಗಾಂಧಿ, ವಿಶಾಲ್ ಹೆಗಡೆ, ದಿಲೀಪ್ ರಾಜ್ ಪೂಜಾ ಗಾಂಧಿ ಮತ್ತೊಮ್ಮೆ ಅಗ್ನಿ ಪರೀಕ್ಷೆ ಎದುರಿಸುತ್ತಿದ್ದಾರೆ. ಕಳೆದ ವಾರವಷ್ಟೇ ಬಿಡುಗಡೆಯಾದ ಫ್ಲಾಪ್ ಚಿತ್ರ ಹುಚ್ಚಿಯಿಂದಾಗಿ
ನಿರಾಸೆಗೊಂಡಿದ್ದ ಪೂಜಾ ಮತ್ತೊಮ್ಮೆ ಹುಚ್ಚಿಯಂತಹ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಪ್ರತಿಜ್ಞೆ ಸ್ವೀಕರಿಸಿದ್ದಾರೆ. ಅಷ್ಟರಲ್ಲೇ 'ನಿನಗಾಗಿ ಕಾದಿರುವೆ' ಚಿತ್ರದ ಮೂಲಕ ಮತ್ತೊಮ್ಮೆ ಮಾಸ್ ಪ್ರೇಕ್ಷಕರನ್ನು ಸೆಳೆಯಲು ಕಾಯುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರಬೇಕಿದ್ದ ಈ ಚಿತ್ರ ಹಲವು ಕಾರಣಗಳಿಂದ ತಡವಾಗಿ ಬಿಡುಗಡೆಯಾಗುತ್ತಿದ್ದು, 30 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ ನಿರ್ದೇಶಕರು. ಚಿತ್ರದಲ್ಲಿ ಇಬ್ಬರು ನಾಯಕರು. ಅಂದರೆ ಇದೊಂದು ತ್ರಿಕೋನ
ಪ್ರೇಮಕತೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಸಾಫ್ಟ್‌ವೇರ್ ಇಂಜಿನಿಯರ್ ಪಾತ್ರದಲ್ಲಿ ಪೂಜಾಗಾಂಧಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ, ಈ ಚಿತ್ರದ ಮೂಲಕ ಮೊದಲ ಬಾರಿಗೆ ಪೂಜಾ ತಮ್ಮ ಪಾತ್ರಕ್ಕೆ ತಾವೇ ಧ್ವನಿ ನೀಡಿದ್ದಾರೆ.ಚಿತ್ರಕ್ಕೆ ಪಿ. ರಾಜನ್‌ರ ಛಾಯಾಗ್ರಹಣವಿದ್ದು, ಮದನ್ ಹರಿಣಿಯವರ ನೃತ್ಯ ಸಂಯೋಜನೆಯಿದೆ. ನಿರ್ದೇಶಕ ಜಾಲಿ ಬಾಸ್ಟಿನ್ ಅವರಿಗೆ ಇದು ಮೊದಲ ಚಿತ್ರ ಇದಾಗಿದೆ. ಈವರೆಗೆ 300ಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಸ ನಿರ್ದೇಶಕರಾಗಿ ದುಡಿದ ಅನುಭವ ಇವರ ಬೆನ್ನಿಗಿದೆ. ನಿರ್ಮಾಪಕ ಮತ್ತು ನನ್ನ ನಡುವೆ ಉಂಟಾಗಿದ್ದ ಎಲ್ಲಾ ಸಮಸ್ಯೆಗಳು ಸ್ನೇಹಿತರ ಸಹಕಾರದಿಂದ ಬಗೆಹರಿದಿದೆ. ಈಗ ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿದೆ ಎಂದು ಸಂಭ್ರಮದಿಂದ ಹೇಳುತ್ತಾರೆ ಜಾಲಿ ಬಾಸ್ಟಿನ್. 'ನಿನಗಾಗಿ ಕಾದಿರುವೆ' ಚಿತ್ರ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುತ್ತಾ ಎನ್ನುವುದು ಚಿತ್ರ ಬಿಡುಗಡೆಯಾದ ಬಳಿಕವೇ ತಿಳಿಯಬೇಕು.
» Ramya wishes all the best to Rakshitha for Joogaiah
» My relation with Ramya is Good : Sudeep
» Suryakanthi - chethans wallpapers
» Manasaare is ready for release
» Just watch "School Master"
» Diganth signed for his new movie
» Shivraj kumar visiting Shabarimalai
» Swayamvara (2010) Kannada MP3 Songs
» Prem, Rakshita promotes - " Joogaiah "
» Will Ramya be #1 this year????
» Shivanna, Ragahavendra and Puneeth - body doners
» Maniratnam's Agni Nakshatram in Kannada
» Pooja Gandhi back with Raghu mukarjee
» NEENELLO NAANALLE (2006) Kannada 1-CD DVDrip
» post ur favourite movies of vishnu vardhan
» Hombisilu (1978) kannada DVDrip | MP4
» Puneeth Rajkumar In Raaj
» AapthaRakshaka (2010) Audio Songs
» PREETHIGAAGI MOVIE